Akshara Bhandara

ಸಾಹಿತ್ಯಾಸಕ್ತರ ಪುಸ್ತಕ ವಿನಿಮಯದ ಗ್ರಂಥಾಲಯವೇ ಬೃಂದಾವನದ “ಅಕ್ಷರ ಭಂಡಾರ”. ಸುಮಾರು 3 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಒಳಗೊಂಡ ಈ ಗ್ರಂಥಾಲಯ, ಓದುಗರಿಗೆ ಒಂದು “ಪುಸ್ತಕ ಕಾಶಿ”. ಎಲ್ಲಾ ಪುಸ್ತಕಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಇಡಲಾಗಿದ್ದು, ಓದುಗರು ಅದನ್ನು ಎರವಲು ಪಡೆದು ಕೊಳ್ಳಬಹುದು. ಓದಿದ ನಂತರ ವಿಮರ್ಶೆ ಹಾಗು ಚರ್ಚೆಗಳಿಗೆ ಸಾಹಿತ್ಯಾಸಕ್ತರ “ಅಕ್ಷರ ಭಂಡಾರ” ವಾಟ್ಸಾಪ್ಲ್ ಗ್ರೂಪ್ ನಲ್ಲಿ ಸೇರಬಹುದು.
ಎಸ್. ಏಲ್ . ಭೈರಪ್ಪ, ವಸುದೇಂದ್ರ, ಕುವೆಂಪು, ಮಾಸ್ತಿ, ಶ್ರೀ ಶಿವರಾಮ ಕಾರಂತರು, ಬೇಂದ್ರೆ, ಜೋಗಿ ಇನ್ನು ಹಲವಾರು ಲೇಖಕರ ಪುಸ್ತಗಳು ಈ ಗ್ರಂಥಾಲಯದಲ್ಲಿದೆ. ಅಕ್ಷರ ಭಂಡಾರದಿಂದ ಹಲವಾರು ವಿಷಯಗಳ ಸಮಗ್ರ ಚಿಂತನ, ಮಂಕುತಿಮ್ಮನ ಕಗ್ಗ, ವಚನ ಸಾಹಿತ್ಯ, ಸರ್ವಜ್ಞನ ವಚನಗಳ ಮೇಲಿನ ಚರ್ಚೆ ಮುಂತಾದವು ನಡೆಸಲ್ಪಟ್ಟಿವೆ.

ಅಕ್ಷರ ಭಂಡಾರದಲ್ಲಿ ಎಷ್ಟು ಕನ್ನಡ ಪುಸ್ತಕಗಳು ಲಭ್ಯವಿದೆ?

ಇಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಪುಸ್ತಕಗಳಿವೆ. ಮತ್ತು ಆ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ನಾನು ಪುಸ್ತಕ ಎರವಲು ಪಡೆಯುವ ಬಗೆ ಹೇಗೆ?

ನಿಮಗೆ ಬೇಕಾದ ಪುಸ್ತಕವನ್ನು ಪಟ್ಟಿಯಿಂದ ಆಯ್ದುಕೊಳ್ಳಿ. ಅದನ್ನು ಯಾರೂ ಎರವಲು ಪಡೆದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ ಮತ್ತು ಪುಸ್ತಕದ ಮಾಲೀಕನನ್ನು ಸಂಪರ್ಕಿಸಿ, ಪುಸ್ತಕವನ್ನು ಪಡೆಯಿರಿ.

ಪುಸ್ತಕಗಳನ್ನು ಎಲ್ಲಿ ಇಡಲಾಗಿದೆ?

ಪುಸ್ತಕಗಳು ಲೈಬ್ರರಿಯಂತೆ ಒಂದು ಜಾಗದಲ್ಲಿ ಲಭ್ಯವಿಲ್ಲ. ಅಕ್ಷರ ಭಂಡಾರದಲ್ಲಿ ತೊಡಗಿಸಿಕೊಂಡಿರುವ ಪುಸ್ತಕಗಳ ಮಾಲೀಕರ ಬಳಿ ಇವು ಲಭ್ಯವಿದೆ.

ಪುಸ್ತಕ ಎರವಲು ಪಡೆಯಲು ಏನಾದರೂ ಷರತ್ತು ಅಥವಾ ನಿಯಮಗಳಿವೆಯೇ?

ಎರವಲು ಪಡೆಯಲು ಯಾವ ಷರತ್ತುಗಳೂ ಇಲ್ಲ. ಪುಸ್ತಕ ಪಡೆಯಲು ಇರುವ ಒಂದೇ ಅಗತ್ಯ-ನಿಮ್ಮ ಓದುವ ಆಸಕ್ತಿ. ಮತ್ತು ಅದನ್ನು ಹಿಂದಿರಿಗಿಸುವ ಬದ್ಧತೆ.

ಒಮ್ಮೆಗೆ ಎಷ್ಟು ಪುಸ್ತಕಗಳನ್ನು ನಾನು ಎರವಲು ಪಡೆಯಬಹುದು?

ನೀವು ಎಷ್ಟು ಪುಸ್ತಕಗಳನ್ನು ಬೇಕಾದರೂ ಎರವಲು ಪಡೆಯಬಹುದು. ಆದರೆ ಒಂದು ತಿಂಗಳಲ್ಲಿ ನೀವು ಎಷ್ಟು ಪುಸ್ತಕ ಓದುತ್ತೀರೋ ಅಷ್ಟನ್ನೇ ಪಡೆದು, ಓದಿ ಹಿಂದಿರುಗಿಸಿ. ಇದರಿಂದ ಬೇರಾರಿಗಾದರೂ ಅದು ಬೇಕಿದ್ದರೆ ಅನುಕೂಲವಾಗುತ್ತದೆ.

ಅಕ್ಷರ ಭಂಡಾರಕ್ಕೆ ಪುಸ್ತಕ ದಾನ ಮಾಡಬಹುದೇ?

ಖಂಡಿತ, ಅಕ್ಷರ ಭಂಡಾರದ ಸಂಚಾಲಕರಾದ ದಾಶರಥಿ ಯವರನ್ನು ಸಂಪರ್ಕಿಸಿ
# 732-306-3566

ನನ್ನಲ್ಲಿರುವ ಪುಸ್ತಕಗಳನ್ನು ಅಕ್ಷರ ಭಂಡಾರಕ್ಕೆ ಸೇರಿಸಬಹುದೇ?

ಏಕಿಲ್ಲ. ಅಕ್ಷರ ಭಂಡಾರಕ್ಕೆ ಇದರಂತಹ ಸಂತೋಷದ ವಿಷಯ ಬೇರೆ ಇಲ್ಲ. ನಿಮ್ಮ ಪುಸ್ತಕಗಳನ್ನು ಪಟ್ಟಿ ಮಾಡಲು ಸತ್ಯರವರನ್ನು ದೂರವಾಣಿ ಸಂಖ್ಯೆ 732-763-2363 ಯಲ್ಲಿ ಸಂಪರ್ಕಿಸಿ.